ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಕರ್ನಾಟಕ ಸರ್ಕಾರ

ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ

ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರು

×
ಅಭಿಪ್ರಾಯ
ಇಲಾಖೆಯ ಹಿನ್ನೆಲೆ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ

 

ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ

 

ಪರಿಚಯ:

 


ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆಯನ್ನು ಅಜೀವಿಕ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಎಂದು ಪುನರ್ ರಚಿಸುವ ಮೂಲಕ ೨೦೧೧ರಿಂದ ಜಾರಿಗೊಳಿಸಿದೆ. ರಾಜ್ಯ ಸರ್ಕಾರವು ಯೋಜನೆಯನ್ನು ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ ಮೂಲಕ ೨೦೧೧ ರಿಂದ ಹಂತ ಹಂತವಾಗಿ ವಿಸ್ತರಣೆ ಮಾಡುತ್ತಾ ೨೨೬ ತಾಲೂಕುಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮುಖ್ಯ ಉದ್ದೇಶ ಹಾಗೂ ಧ್ಯೇಯಗ್ರಾಮೀಣ ಬಡತನವನ್ನು ಕಡಿಮೆ ಮಾಡಲು ಲಾಭದಾಯಕ ವೇತನ ಮತ್ತು ಉದ್ಯೋಗವಕಾಶಗಳನ್ನು ಸಮುದಾಯದತ್ತ ಸಂಸ್ಥೆಗಳ ಮೂಲಕ ಒದಗಿಸಿ, ಜೀವನೋಪಾಯ ಚಟುವಟಿಕೆಗಳ ಮೂಲಕ ಅವರನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿರುತ್ತದೆ. ಅಭಿಯಾನ ಮೂಲಕ ಗ್ರಾಮೀಣ ಪ್ರದೇಶದ ಬಡವರಲ್ಲಿನ ಕುಟುಂಬ ಆದಾಯವನ್ನು ಉತ್ತಮಪಡಿಸಲು ದೀರ್ಘಾವಧಿಯ ಜೀವನೋಪಾಯ ಚಟುವಟಿಕೆಗಳ ಅವಕಾಶಗಳನ್ನು ಹೆಚ್ಚಿಸುವುದರೊಂದಿಗೆ ಹಣಕಾಸು ಮತ್ತು ಹಣಕಾಸೇತರ ಸೇವೆಗಳನ್ನು ಅಭಿವೃದ್ಧಿಪಡಿಸುವುದಾಗಿರುತ್ತದೆ.ಗ್ರಾಮೀಣ ಬಡತನ ನಿರ್ಮೂಲನೆಗಾಗಿ ಸಮರ್ಥ ಮತ್ತು ಪರಿಣಾಮಕಾರಿಯಾದ ಸಾಂಸ್ಥಿಕ ವೇದಿಕೆಗಳನ್ನು ರಚಿಸುವ ಗುರಿಯನ್ನು ಅಭಿಯಾನವು ಹೊಂದಿದೆ.

 

 

ಉದ್ದೇಶ:

 


೧. ಸಾಮಾಜಿಕ ಸೇರ್ಪಡೆ (ಬಡಜನರನ್ನು ಜೊತೆಗೂಡಿಸಿ ಅವರ ಸಂಸ್ಥೆಗಳ ನಿರ್ಮಾಣ ಮಾಡುವುದು)


೨. ಹಣಕಾಸು ಸೇರ್ಪಡೆ (ಸ್ವಸಹಾಯ ಗುಂಪುಗಳಿಗೆ-ಬ್ಯಾಂಕಿನ ಸಂಪರ್ಕಗಳು, ಆರ್ಥಿಕ ಸಾಕ್ಷರತೆ ಮತ್ತು ಬ್ಯಾಂಕಿಂಗ್‌ನಿಂದ ಹಿಡಿದು ಬ್ಯಾಂಕೇತರ ಚಟುವಟಿಕೆಗಳ ವರೆಗೆ)


೩. ಆರ್ಥಿಕ ಸೇರ್ಪಡೆ (ಜೀವನೋಪಾಯ ಉತ್ತೇಜನ ಮತ್ತು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಆಧಾರಿಸಿದ ಉತ್ಪಾದನಾ ಸಂಸ್ಥೆಗಳಂತಹಗಳ ಜೀವನೋಪಾಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು. ಸ್ವ-ಉದ್ಯೋಗ ಮತ್ತು ಉದ್ಯಮ ಅಭಿವೃದ್ಧಿ ಹಾಗೂ ಉದ್ಯೋಗ ಸಂಬಂಧಿ ಕುಶಲತೆಯ ಅಭಿವೃದ್ಧಿ)


ಈ ನಿಟ್ಟಿನಲ್ಲಿ ಪ್ರಮುಖವಾಗಿ ೪ ಅಂತರ್ ಸಂಬಂಧ ವಿಷಯಾಧಾರಿತ ಅಂಶಗಳಾದ ಸಾಮಾಜಿಕ ಕ್ರೂಡೀಕರಣ ಸಾಮಾಜಿಕ ಅಭಿವೃದ್ಧಿ ಆರ್ಥಿಕ ಸೇರ್ಪಡೆ ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಚಟುವಟಿಕೆಗಳಾಗಿವೆ.

 

ಇದರೊಂದಿಗೆ ಅಭಿಯಾನದ ಫಲಾನುಭವಿಗಳ ಮತ್ತು ಅವರ ಕುಟುಂಬದ ಸದಸ್ಯರಲ್ಲಿ ಜೀವನೋಪಾಯ ಚಟುವಟಿಕೆಗಳಿಗೆ ಸಂಬಂಧಿಸಿದ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸುವುದಕ್ಕಾಗಿ ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಕೌಶಲ್ಯ ಯೋಜನೆ ಮತ್ತು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ.

 


ಈ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವು ಗ್ರಾಮೀಣ ಎಲ್ಲಾ ಬಡ ಕುಟುಂಬಗಳನ್ನು ಸ್ವಸಹಾಯ ಗುಂಪುಗಳ ರಚನೆ ಮೂಲಕ ಅಭಿಯಾನದ ವ್ಯಾಪ್ತಿಗೆ ತರುವುದರೊಂದಿಗೆ ವಾರ್ಡ್ ಮಟ್ಟದ ಒಕ್ಕೂಟಗಳು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ಮತ್ತು ತಾಲೂಕ ಮಟ್ಟದ ಒಕ್ಕೂಟ ಗಳಾಗಿ ಸಂಘಟಿಸುವ ಗುರಿಯನ್ನು ಹೊಂದಿದೆ. ಅಭಿಯಾನವು ಅರ್ಹ ಸ್ವಸಹಾಯ ಗುಂಪುಗಳು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಸಮುದಾಯ ಬಂಡವಾಳ ನಿಧಿ, ಸುತ್ತು ನಿಧಿ ಮತ್ತು ದುರ್ಬಲ ವರ್ಗದವರಿಗೆ (ಸಂಕಷ್ಟಗೋಳಪಟ್ಟ) ಸಮುದಾಯ ಪರಿಷ್ಕರಣಾ ನಿಧಿಗಳನ್ನು ಒದಗಿಸುತ್ತಿದೆ.

 


ಇದು ಸ್ವಸಹಾಯ ಗುಂಪುಗಳಿಗೆ ಔಪಚಾರಿಕ ಬ್ಯಾಂಕಿಂಗ್ ಸಂಸ್ಥೆಗಳಿಂದ ಹಣಕಾಸು ಸೌಲಭ್ಯ ಪಡೆಯುವಲ್ಲಿ ಅನುಕೂಲ ಮತ್ತು ಸುಸ್ಥಿರ ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ಸಶಕ್ತರನ್ನಾಗಿಸುತ್ತಿದೆ. ಇಷ್ಟೇ ಅಲ್ಲದೆ ಅಭಿಯಾನವು ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ತಾಂತ್ರಿಕ ಮತ್ತು ಪೂರಕಸೇವೆಗಳಿಗೆ ಪಡೆಯುವಲ್ಲಿ ಅನುಕೂಲ ಕಲ್ಪಿಸಿ ನಿರಂತರ ಬೆಂಬಲ ನೀಡುತ್ತಿದೆ.

 

 

ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ರಚನೆ ಮತ್ತು ಬಲವರ್ಧನೆ. ಪ್ರತಿ ಗ್ರಾಮಪಂಚಾಯತಿ ಮಟ್ಟದಲ್ಲಿ ಗ್ರಾಮೀಣ ಬಡತನ ನಿವಾರಣೆ ಯೋಜನೆ ಕ್ರಿಯಾ ಯೋಜನೆ ತಯಾರಿಕೆ, ವನ ಧನ ವಿಕಾಸ ಕೇಂದ್ರ ಸ್ಥಾಪನೆ, ರೈತ ಉತ್ಪಾದಕರ ಗುಂಪುಗಳ ರಚನೆ, ಸ್ವಸಹಾಯ ಗುಂಪಿನವರು ತಯಾರಿಸುವ ಉತ್ಪನ್ನಗಳಿಗೆ ಆನ್‌ಲೈನ್ ಸೌಲಭ್ಯ ಸೇರಿದಂತೆ ಮಾರುಕಟ್ಟೆಗಳ ವ್ಯವಸ್ಥೆ. ಮಹಿಳೆಯರ ಸಬಲೀಕರಣಕ್ಕಾಗಿ ಉದ್ಯಮಿ ಚಟುವಟಿಕೆಗಳು ಮತ್ತು ಸುಸ್ಥಿರ ಜೀವನೋಪಾಯ ಉದ್ಯೋಗಗಳಿಗಾಗಿ ಇತರೆ ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆ ವೇದಿಕೆ ಮೂಲಕ ವಿವಿಧ ಸೇವಾ ಸೌಕರ್ಯಗಳ ಸೌಲಭ್ಯ ಪಡೆಯುವಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

 

 

ಮಹಿಳೆಯರ ಆರೋಗ್ಯಕರ ಜೀವನಕ್ಕಾಗಿ ಆಹಾರ ಪೌಷ್ಟಿಕತೆ ಆರೋಗ್ಯ ನೈರ್ಮಲ್ಯತೆ ಕುರಿತಾದ ಅನೇಕ ಕಾರ್ಯಕ್ರಮಗಳನ್ನು ಪಡಿಸಲಾಗುತ್ತಿದೆ. ಮಹಿಳೆಯರನ್ನು ದೌರ್ಜನ್ಯದಂತಹ ಕೃತ್ಯಗಳಿಂದ ರಕ್ಷಿಸಿಕೊಳ್ಳುವಲ್ಲಿ ಕುರಿತಾದ ಜಾಗೃತಿ ಶಿಕ್ಷಣವನ್ನು ದೌರ್ಜನ್ಯ ಮುಕ್ತ ಎಂಬ ಕಾರ್ಯಕ್ರಮದಡಿ ಪ್ರತಿ ಕುಟುಂಬದ ಬಾಗಿಲಿಗೂ ತಲುಪಿಸಲಾಗಿದೆ.

 

ಉಪ ಘಟಕಗಳು

 

೧. ಸಾಮಾಜಿಕ ಕ್ರೂಡೀಕರಣ-ಸಾಂಸ್ಥಿಕ ಸಂಸ್ಥೆಗಳ ರಚನೆ ಮತ್ತು ಬಲವರ್ಧನೆ


೨. ಸಾಮಾಜಿಕ ಸೇರ್ಪಡೆ ಸಾಮಾಜಿಕ ಅಭಿವೃದ್ಧಿ ಮತ್ತು ಲಿಂಗತ್ವ


೩. ಆರ್ಥಿಕ ಸೇರ್ಪಡೆ


೪. ಕೃಷಿ ಜೀವನೋಪಾಯ


೫. ಮೌಲ್ಯ ಸರಪಳಿ ಅಭಿವೃದ್ಧಿ


೬. ಕೃಷಿಯೇತರ ಜೀವನೋಪಾಯ:/ ಉದ್ಯಮ ಸಂವರ್ಧನ