ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಕರ್ನಾಟಕ ಸರ್ಕಾರ

ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ

ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರು

×
ಅಭಿಪ್ರಾಯ
ಉದ್ದೇಶಗಳು

ಸಂಜೀವಿನಿ-ಕೆಎಸ್ಆರ್.ಎಲ್.ಪಿಎಸ್ ವತಿಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳ ಉದ್ದೇಶ ಈ ಕೆಳಕಂಡಂತಿದೆ. 

 

  1. ರಾಜ್ಯದಲ್ಲಿ ಬಡತನ ನಿರ್ಮೂಲನೆ ಮತ್ತು ಜೀವನೋಪಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
  2. ಬಡ ಜನರ ಸಮಗ್ರ ಅಭಿವೃದ್ಧಿ ಮತ್ತು ಸೇರ್ಪಡೆಗಾಗಿ ಅವಶ್ಯ ವಾತಾವರಣ ಸೃಷ್ಟಿ ಮತ್ತು ಕಾಯಿದೆ ರೂಪಿಸುವುದು.
  3. ಗುರುತಿಸಲಾದ ಪ್ರತಿಯೊಂದು ಗ್ರಾಮೀಣ ಬಡ ಕುಟುಂಬದಿಂದ ಕನಿಷ್ಠ ಒಬ್ಬ ಮಹಿಳಾ ಸದಸ್ಯರನ್ನು ಸ್ವಸಹಾಯ ಗುಂಪುಗಳ ವ್ಯಾಪ್ತಿಗೆ ತರುವ ಮೂಲಕ ಸಮಾಜದ ದುರ್ಬಲ ವರ್ಗಗಳ ಸೇರ್ಪಡೆಗೆ ಅವಕಾಶ ಕಲ್ಪಿಸುವುದು.
  4. ಸದೃಢ ಸ್ವಸಹಾಯ ಗುಂಪುಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳನ್ನು ಸೃಜಿಸುವುದು.
  5. ಬಡವರು ತಮ್ಮ ಸೀಮಿತ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಅನುವಾಗುವಂತೆ ಅಗತ್ಯ ವಿಶೇಷ ಸಾಂಸ್ಥಿಕ ಅಭಿವೃದ್ಧಿ ಕಾರ್ಯನಿರ್ವಹಣೆ. ವಿವಿಧ ಉತ್ಪಾದಕ ಗುಂಪುಗಳು,  ಜೀವನೋಪಾಯ ಚಟುವಟಿಕೆ ಸಂಸ್ಥೆಗಳು, ಸಹಕಾರ ಸಂಸ್ಥೆಗಳು, ಉದ್ದಿಮೆಗಳನ್ನು ರಚಿಸಿ ಅವರುಗಳ ಏಳಿಗೆಗಾಗಿ ಅಗತ್ಯ  ಸೇವೆಗಳನ್ನು ಒದಗಿಸುವುದು.  ಮುಖ್ಯವಾಗಿ ಸಂಪನ್ಮೂಲ ಕೇಂದ್ರಗಳು, ಮಾಹಿತಿ ತಂತ್ರಜ್ಞಾನ, ಬಂಡವಾಳ ನೀಡಿಕೆ,  ಶಾಸನಬದ್ಧ ನಿಯಮಾವಳಿಗಳು, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಮತ್ತು ಇತ್ಯಾದಿ.
  6. ಬಡ ಕುಟುಂಬಗಳ ಏಳಿಗೆಗಾಗಿ ರಚನೆಗೊಂಡ ಸಮುದಾಯ ಆಧಾರಿತ ಸಂಸ್ಥೆಗಳ ಸಬಲೀಕರಣಕ್ಕಾಗಿ ನಿರಂತರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು. ಈ ಮೂಲಕ ಬಡವರಿಗೆ ತಮ್ಮ ಸಂಸ್ಥೆಗಳನ್ನು ನಿರ್ವಹಿಸುವ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುವುದು. 
  7. ಎಲ್ಲಾ ಬಡ ಕುಟುಂಬಗಳಿಗೆ ಹಣಕಾಸು ಸೇರ್ಪಡೆಗಾಗಿ ಸೌಲಭ್ಯಗಳನ್ನು ಕಲ್ಪಿಸುವುದು. ಸಮುದಾಯ ಬಂಡವಾಳ, ಬ್ಯಾಂಕ್ ಸಾಲ ಸಂಪರ್ಕ, ಆರ್ಥಿಕ ಸಾಕ್ಷರತೆ ಮತ್ತು ಬ್ಯಾಂಕೇತರ ಚಟುವಟಿಕೆಗಳನ್ನು ಒಳಗೊಂಡು ಒಟ್ಟಾರೆಯಾಗಿ  ಹಣಕಾಸು ಸೇರ್ಪಡೆಯ ಬೇಡಿಕೆ ಮತ್ತು ಪೂರೈಕೆ ಎರಡೂ ಕಡೆ ಕೆಲಸ ಮಾಡುವುದು.
  8. ಪ್ರಸ್ತುತ ಅಸ್ತಿತ್ವದಲ್ಲಿರುವ ಜೀವನೋಪಾಯಗಳನ್ನು ಸುಸ್ಥಿರಗೊಳಿಸುವ ಮತ್ತು ಅಭಿವೃದ್ಧಿ ಕಡೆಗೆ ಅಗತ್ಯ ಕಾರ್ಯನಿರ್ವಹಿಸುವುದು.   
  9. ಬಡವರ ಉತ್ಪನ್ನ ಮತ್ತು ಸೇವೆಗಳಿಗೆ ಅಗತ್ಯ ಮಾರುಕಟ್ಟೆ ಬೆಂಬಲವನ್ನು ಒದಗಿಸುವುದು. ಮಾರುಕಟ್ಟೆ ಬೆಂಬಲದಲ್ಲಿ ಪ್ರಮುಖವಾಗಿ ಆಯಾ ರಂಗಗಳಿಗೆ ಸಂಬಂಧಿತ ಮಾರುಕಟ್ಟೆ ಸಂಶೋಧನೆ, ಮಾರುಕಟ್ಟೆ ಜ್ಞಾನ, ತಂತ್ರಜ್ಞಾನ, ವಿಸ್ತರಣೆ ಸಂಪರ್ಕಗಳನ್ನು ಅಭಿವೃದ್ಧಿಪಡಿಸುವುದು ಇತ್ಯಾದಿ.
  10. ವಿಶೇಷವಾಗಿ ಮಾರುಕಟ್ಟೆ ಸಂಪರ್ಕಗಳಿಗೆ ಸಂಬಂಧಿಸಿದಂತೆ ವಿವಿಧ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಮತ್ತು ಒಡಂಬಡಿಕೆಗಳನ್ನು ಪ್ರೋತ್ಸಾಹಿಸಿ ಬೆಂಬಲಿಸುವುದು.
  11. ಯುವಜನರಿಗಾಗಿ ಅಸ್ತಿತ್ವದಲ್ಲಿರುವ ಕೌಶಲ್ಯ ಮತ್ತು ಉದ್ಯೋಗ ಆಧಾರಿತ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಪಾಲುದಾರಿಕೆ ಕಾರ್ಯಗಳನ್ನು ನಿರ್ವಹಿಸುವುದು. ಈ ಮೂಲಕ ಉದಯೋನ್ಮುಖ ಮಾರುಕಟ್ಟೆಗಳಲ್ಲಿ, ಬಡವರಿಗೆ ಜೀವನೋಪಾಯದ ಅವಕಾಶಗಳು ಅಧಿಕವಾಗಿ ದೊರೆಯುವಂತೆ ಮಾಡುವುದು.
  12. ಸಂಸ್ಥೆಯ ಉದ್ದೇಶ ಮತ್ತು ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರೇತರ ಸಂಸ್ಥೆಗಳು ಮತ್ತು ಇತರ ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಅವಶ್ಯ ಸಹಭಾಗಿತ್ವವನ್ನು ಹುಡುಕುವುದು ಮತ್ತು ನಿರ್ವಹಿಸುವುದು.
  13. ವಿವಿಧ ಬಡತನ ನಿರ್ಮೂಲನೆ ಮತ್ತು ಸಬಲೀಕರಣ ಯೋಜನೆಗಳ ನಡುವೆ ಅಭಿಗಮನವನ್ನು ಸಾಧಿಸುವುದು.
  14. ಬಡವರಿಗೆ ಅವರ ಒಟ್ಟಾರೆ ಸಾಮಾಜಿಕ ಪ್ರಗತಿ ಮತ್ತು ಜೀವನೋಪಾಯದ ಅಭಿವೃದ್ಧಿಗಾಗಿ ಅವಶ್ಯ ಸಾಮಾಜಿಕ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸಲು ಪ್ರತ್ಯೇಕ ಸಿಬ್ಬಂದಿ ಬೆಂಬಲ ನೀಡಿಕೆ ಮತ್ತು ಸಂಪನ್ಮೂಲ ವ್ಯಕ್ತಿಗಳ ಸೇವಾ ಕಾರ್ಯವನ್ನು ನಿರ್ಮಿಸುವುದು.
  15. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಇತರೆ ದ್ವಿಪಕ್ಷೀಯ, ಬಹು-ಪಕ್ಷೀಯ ಸಂಸ್ಥೆಗಳಿಂದ ಬಡತನ ನಿರ್ಮೂಲನೆ ಮತ್ತು ಬಡವರ ಜೀವನೋಪಾಯದ ಅಭಿವೃದ್ಧಿಗೆ ನಿರ್ಧಿಷ್ಟ ಯೋಜನೆಗಳ ಅನುಷ್ಠಾನ ಸೇರಿದಂತೆ ಎಲ್ಲಾ ಸಂಬಂಧಿತ ಚಟುವಟಿಕೆಗಳನ್ನು ಒಗ್ಗೂಡಿಸುವಿಕೆಯ ಮೂಲಕ ಕೈಗೊಳ್ಳುವುದು.