ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಕರ್ನಾಟಕ ಸರ್ಕಾರ

ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ

ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರು

×
ಅಭಿಪ್ರಾಯ
IBCB

ಸಾಮಾಜಿಕ ಕ್ರೋಢೀಕರಣ

 
ಸಾಮಾಜಿಕ ಕ್ರೋಢೀಕರಣದಡಿಯಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಲಸೆ ಹೋಗುವವರು, ನಿರ್ಗತಿಕರು, ಜೀತ ಪದ್ಧತಿಯಲ್ಲಿರುವವರು, ಮಂಗಳಮುಖಿಯರು, ದೇವದಾಸಿಯರು, ಲೈಂಗಿಕ ಕಾರ್ಯಕರ್ತೆಯರು, ಅಪಾಯದ ಅಂಚಿನಲ್ಲಿರುವವರು ನಮ್ಮ ಕಾರ್ಯಕ್ರಮದ ಪ್ರಪ್ರಥಮ ಗುರಿಯಾಗಿರುತ್ತಾರೆ. ಒಂಟಿ ಮಹಿಳೆಯ ಕುಟುಂಬ, ಮಹಿಳೆ ನಡೆಸುವ ಕುಟುಂಬ, ವಿವಾಹ ವಿಚ್ಛೇದಿತರು, ಅವಿವಾಹಿತ ತಾಯಂದಿರು, ಮುಂತಾದ ಕುಟುಂಬಗಳು ಈ ಕಾರ್ಯಕ್ರಮದ ಗುರಿಯಾಗಿಟ್ಟುಕೊಂಡಿದ್ದೇವೆ.

 

ಸಾಮಾಜಿಕ ಕ್ರೋಢೀಕರಣವನ್ನು ಮಾಡಿಕೊಳ್ಳುವ ವಿಧಾನ

• ಒಂದು ತಾಲ್ಲೂಕಿಗೆ ೨೦ ಜನ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡುವುದು.
• ೫ ಜನ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ತಂಡವನ್ನು ರಚಿಸುವುದು.
• ಪ್ರತೀ ತಂಡವು ಪ್ರಥಮ ಸುತ್ತಿನಲ್ಲಿ ೧ ಗ್ರಾಮ ಪಂಚಾಯಿತಿಯಲ್ಲಿ ೧೪ ದಿನಗಳನ್ನೊಳಗೊಂಡ ಗ್ರಾಮ ವಾಸ್ತವ್ಯವನ್ನು ಮಾಡುವುದು ಮತ್ತು ವಾರ್ಡ್ ಮಟ್ಟದ ಒಕ್ಕೂಟಗಳನ್ನು ಸ್ಥಾಪಿಸುವುದು.
• ೨ನೇ ಸುತ್ತಿನ ಕೊನೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟವನ್ನು ರಚಿಸುವುದು.
• ಪ್ರತೀ ಸುತ್ತಿನಲ್ಲೂ ವಾರ್ಡ್ ಮಟ್ಟದಲ್ಲಿ ಸ್ವಸಹಾಯ ಗುಂಪುಗಳ ಶ್ರೇಣೀಕರಣ ಮಾಡುವುದು.
• ಪ್ರತೀ ಸುತ್ತಿನ ಹಂತದಲ್ಲಿ ಗ್ರಾಮ ಮಟ್ಟದ ಸಭೆಯನ್ನು ಕರೆದು ಗ್ರಾಮ ವಾಸ್ತವ್ಯದ ವಿವರವನ್ನು ತಿಳಿಸುವುದು.
• ೧೦ ರಿಂದ ೨೦ ಸದಸ್ಯರಿರುವ ಸ್ವಸಹಾಯ ಗುಂಪುಗಳನ್ನು ರಚಿಸುವುದು.
• ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಎಲ್ಲರೂ ಭಾಗಿಗಳಾಗಿ ಗ್ರಾಮ ವಾಸ್ತವ್ಯದ ಮೂಲಕ ಸಂಘಟಿಸುವುದು.
• ಸ್ವಸಹಾಯ ಗುಂಪುಗಳಿಗೆ ಸದಸ್ಯರಾಗಿಲ್ಲದವರನ್ನೂ ಸಾಮಾಜಿಕ ಕ್ರೋಢೀಕರಣದ ಹೆಸರಿನಲಿ ್ಲ ಸಂಘಟಿಸಲು ಬದ್ಧರಾಗುವುದು.

ಸ್ವಸಹಾಯ ಗುಂಪುಗಳ ಸಾಂಸ್ಥೀಕರಣ

 

ಪ್ರಜಾ ಪ್ರಭುತ್ವದ ತತ್ವದಂತೆ ವಾರ್ಡ್ಗಳÀಲ್ಲಿ ವಾರ್ಡ್ ಮಟ್ಟದ ಒಕ್ಕೂಟವನ್ನು ಸ್ವ-ಸಹಾಯ ಸಂಘಗಳ ೨ ಪ್ರತಿನಿಧಿಗಳೊಂದಿಗೆ ರಚಿಸುತ್ತೇವೆ.


ವಾರ್ಡ್ ಮಟ್ಟದ ಒಕ್ಕೂಟದ ೩ ಜನ ಸದಸ್ಯರೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟವನ್ನು ರಚಿಸುತ್ತೇವೆ. ಈ ಒಕ್ಕೂಟಗಳು ನಮ್ಮಿಂದಲೇ ನಮ್ಮ ಸರ್ವತೋಮುಖ ಅಭಿವೃದ್ದಿಗಾಗಿ ರಚಿಸಲ್ಪಟ್ಟಿರುತ್ತವೆ.
ಸ್ವಸಹಾಯ ಗುಂಪುಗಳು ೧೦ ರಿಂದ ೨೦ ಜನರ ಸ್ವಸಹಾಯ ಗುಂಪುಗಳು ಸಾಮಾಜಿಕ ಕ್ರೋಢೀಕರಣ, ಕಿರು ಬಂಡವಾಳ ಹೂಡಿಕೆ ಯೋಜನೆ ತಯಾರಿ ಮತ್ತು ಅನುಷ್ಟಾನಗಳ ಪಾತ್ರವಹಿಸುತ್ತದೆ.

 

ವಾರ್ಡ್ ಮಟ್ಟದ ಒಕ್ಕೂಟದ ಜವಾಬ್ದಾರಿಗಳು ಮತ್ತು ಪಾತ್ರ

 

ವಾರ್ಡ್ ಮಟ್ಟದ ಒಕ್ಕೂಟದಲ್ಲಿ ಸಾಮಾಜಿಕ ಸಂಘಟನೆ ಮತ್ತು ಕ್ರಿಯಾ ಸಮಿತಿ ಹಾಗೂ ಬ್ಯಾಂಕ್ ಲಿಂಕೇಜ್ ಮತ್ತು ಕಿರು ಬಂಡವಾಳ ಯೋಜನೆ (ಎಂಐಪಿ) ಸಮಿತಿ ಎಂಬ ಎರಡು ಸಮಿತಿಗಳನ್ನು ರಚಿಸಲಾಗುವುದು. ಪ್ರತಿ ಸಮಿತಿಯು ಎರಡು ಸದಸ್ಯರುಗಳನ್ನೊಳಗೊಂಡಿರುತ್ತವೆ.

 

ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಪಾತ್ರ ಮತ್ತು ಜವಾಬ್ದಾರಿಗಳು


• ಸ್ವಸಹಾಯ ಗುಂಪುಗಳ ಮತ್ತು ವಾರ್ಡ್ ಮಟ್ಟದ ಸದಸ್ಯರುಗಳ ಸಾಮರ್ಥ್ಯ ಅಭಿವೃದ್ದಿ.


• ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಸಾಮರ್ಥ್ಯ ಅಭಿವೃದ್ದಿಪಡಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.


• ಕಿರು ಬಂಡವಾಳ ನಿಧಿ ಮೇಲ್ವಿಚಾರಣೆ


• ಒಕ್ಕೂಟಕ್ಕೆ ಅಗತ್ಯವಾದ ಎಲ್ಲಾ ವಿಧದ ಸಂಗ್ರಹಣೆ ಮತ್ತು ಖರೀದಿ.


• ವಾರ್ಡ್ ಮಟ್ಟದ ಒಕ್ಕೂಟಗಳಿಗೆ ಅಗತ್ಯ ಬೆಂಬಲ ಮತ್ತು ಸಹಕಾರ ನೀಡುವುದು.


• ಸ್ವಸಹಾಯ ಗುಂಪುಗಳ ಲೆಕ್ಕಪರಿಶೋಧನೆ.


ಸಮುದಾಯ ಸಂಪನ್ಮೂಲ ವ್ಯಕ್ತಿ ಗಳು


೧. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ (ಐಅಖP)


ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಸ್ವ ಸಹಾಯ ಗುಂಪಿನ ಸದಸ್ಯರಾಗಿ ಸುದೀರ್ಘ ಅನುಭವವನ್ನು ಹೊಂದಿಬೇಕು ಮತ್ತು ಸ್ವ ಸಹಾಯ ಗುಂಪುಗಳ ಸಬಲೀಕರಣ ಮತ್ತು ಬಡತನ ನಿವಾರಣೆಗೆ ಬಲವಾದ ಸಾಧನಗಳಾಗಿವೆ ಎಂಬ ನಂಬಿಕೆಯನ್ನು ಬೆಳೆಸಿಕೊಂಡಿರಬೇಕು. ಈ ಯಶಸ್ವಿ ಮಹಿಳೆಯರು ನಮ್ಮ ಪ್ರದೇಶದಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಅನುಭವದ ಕಲಿಕೆ ಮತ್ತು ಉತ್ತಮ ಅಭ್ಯಾಸಗಳೊಂದಿಗೆ ಸಾಂಸ್ಥಿಕ ಅಭಿವೃದ್ದಿ ಪ್ರಕ್ರಿಯೆಯನ್ನು ಪುನರಾವರ್ತಿಸಲು ಅಖPಗಳಾಗಿ ಹೊರಹೊಮ್ಮಿದ್ದಾರೆ. ಏSಖಐಒ ಸಿಬ್ಬಂದಿಯ ಅನುಕೂಲದೊಂದಿಗೆ Wಐಈ/ಉPಐಈ ಸದಸ್ಯರು ನಮ್ಮ ಐಅಖPಅನ್ನು ಗುರುತಿಸುತ್ತಾರೆ. ಐಅಖP ಗ್ರಾಮ ಮಟ್ಟದಲ್ಲಿ ಕೆಲಸ ಮಾಡುತ್ತಾರೆ ಮತ್ತು ಉPಐಈಗೆ ವರದಿ ಮಾಡುತ್ತಾರೆ. ಅವರು ೧೫-೨೦ ಸ್ವಸಹಾಯ ಗುಂಪುಗಳಿಗೆ ಜವಾಬ್ದಾರರಾಗಿರುತ್ತಾರೆ.

 

೨. ಮುಖ್ಯ ಪುಸ್ತಕ ಬರಹಗಾರರು (ಒಃಏ)


ಉPಐಈನ ಹಣಕಾಸು ನಿರ್ವಹಣೆಗೆ (ಖಾತೆ ಪುಸ್ತಕಗಳ ನಿರ್ವಹಣೆ, Sಊಉಗಳ ಖಾತೆಯ ಪುಸ್ತಕಗಳ ಲೆಕ್ಕಪರಿಶೋಧನೆ ಮತ್ತು ಹಣಕಾಸು ವರದಿಗಳ ತಯಾರಿಕೆ) ಸಂಬಂಧಿತ ಕರ್ತವ್ಯಗಳಿಗೆ ಮುಖ್ಯ ಪುಸ್ತಕ ಬರಹಗಾರರು ಜವಾಬ್ದಾರರಾಗಿರುತ್ತಾರೆ. ಪ್ರತಿ ಉPಐಈನಿಂದ ಒಬ್ಬ ಮುಖ್ಯ ಪುಸ್ತಕ ಬರಹಗಾರರನ್ನು ಆಯ್ಕೆ ಮಾಡಲಾಗುತ್ತದೆ.