ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಕರ್ನಾಟಕ ಸರ್ಕಾರ

ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ

ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರು

×
ಅಭಿಪ್ರಾಯ
ಡಿ ಡಿ ಯು ಜಿ ಕೆ ವೈ - ಪ್ರಯೋಜನಗಳು

ಡಿಡಿಯು-ಜಿಕೆವೈ ಯೋಜನೆಯಲ್ಲಿ ಅಭ್ಯರ್ಥಿಗಳಿಗೆ ದೊರೆಯುವ ಸೌಲಭ್ಯಗಳು

 

1) ತರಬೇತಿಯು ಎಲ್ಲಾ ಪ್ರಶಿಕ್ಷಣರ‍್ಥಿಗಳಿಗೆ ಸಂಪರ‍್ಣ ಉಚಿತವಾಗಿರುತ್ತದೆ. ಎಲ್ಲಾ ವಸತಿ ಸಹಿತ ಪ್ರಶಿಕ್ಷಣಾರ್ಥಿಗಳಿಗೆ ಊಟ ಮತ್ತು ವಸತಿಯು ಉಚಿತವಾಗಿದ್ದು, ವಸತಿ ರಹಿತ ಪ್ರಶಿಕ್ಷಣಾರ್ಥಿಗಳಿಗೆ (ದಿನ ಒಂದಕ್ಕೆ ರೂ.೧೨೫/- ರಂತೆ) ದಿನ ಭತ್ಯೆಯನ್ನು ನೀಡಲಾಗುವುದು. ದಿನ ಭತ್ಯೆ ಮೊತ್ತವು  ಪ್ರಶಿಕ್ಷಣಾರ್ಥಿಯ ಹಾಜರಾತಿಗೆ ಅನುಗುಣವಾಗಿರುತ್ತದೆ.  

 

2) ತರಬೇತಿಯ ಅವಧಿಯಲ್ಲಿ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ, ಕಾರ್ಯಪುಸ್ತಕ, ಟಿಪ್ಪಣಿ ಪುಸ್ತಕ, ಪಠ್ಯ ಪುಸ್ತಕ, ಲೇಖನಿ ಸಾಮಾಗ್ರಿ ಮತ್ತು ಅಧ್ಯಯನ ಸಾಮಾಗ್ರಿಗಳನ್ನು ನೀಡಲಾಗುವುದು.  

 

3) ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಸಮವಸ್ತ್ರ ನೀಡಲಾಗುವುದು. ತರಬೇತಿ ಅವಧಿ ೩ ಅಥವಾ ೬ ತಿಂಗಳಾಗಿದ್ದಲ್ಲಿ ೧ ಜೊತೆ, ೯ ಅಥವಾ ೧೨ ತಿಂಗಳುಗಳಾಗಿದ್ದಲ್ಲಿ ೨ ಜೊತೆ ಸಮವಸ್ತ್ರ ನೀಡಲಾಗುವುದು.

 

4) ಎಲ್ಲಾ ವಸತಿ ಪ್ರಶಿಕ್ಷಣಾರ್ಥಿಗಳಿಗೆ ವೈಯಕ್ತಿಕ ಬ್ಯಾಂಕ್‌ ಖಾತೆಯನ್ನು ತೆರೆಯಲಾಗುವುದು. ಜೊತೆಗೆ ಪಿಎಂಜೆಜೆವೈ ಮತ್ತು ಪಿಎಂಎಸ್‌ಬಿವೈ ವಿಮೆಗಳನ್ನು ಉಚಿತವಾಗಿ ಮಾಡಿ ಕೊಡಲಾಗುವುದು.  

 

5) ತರಬೇತಿ ಪರ‍್ಣಗೊಳಿಸಿದ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಡಿಡಿಯು-ಜಿಕೆವೈ ಕೌಶಲ್ಯ ತರಬೇತಿ ಪ್ರಮಾಣ ಪತ್ರವನ್ನು ನೀಡಲಾಗುವುದು.

 

6) ತರಬೇತಿ ಪೂರ್ಣಗೋಳಿಸಿ ಉದ್ಯೋಗ ಪಡೆದ ಪ್ರಶಿಕ್ಷಣಾರ್ಥಿಗಳು ಈ ಕೆಳಕಂಡಂತೆ ಉದ್ಯೋಗೋತ್ತರ ಬೆಂಬಲ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.