ಕೃಷಿ ಜೀವನೋಪಾಯ ಚಟುವಟಿಕೆಗಳ ಅನುಷ್ಟಾನ ಕಾರ್ಯತಂತ್ರ
ಡೇ-ಎನ್ ಆರ್ ಎಲ್ ಎಂ ಕೆಳಗಿನ ಕೃಷಿ ಜೀವನೋಪಾಯ ಮಧ್ಯಪ್ರವೇಶಿಕೆಗಳು ಬಡ ಕುಟುಂಬದ ಜೀವನೋಪಾಯದ ಮೂರು ಮುಖ್ಯ ಅಂಶಗಳಾದ, ಆಸ್ತಿ, ಅವಕಾಶ ಲಭ್ಯತೆ ಮತ್ತು ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿದೆ. ಮಧ್ಯಪ್ರವೇಶವು ಈ ವಿಷಯಗಳ ಬಗ್ಗೆ ಸಮಗ್ರವಾಗಿ ಗಮನ ಹರಿಸಿ, ತನ್ಮೂಲಕ ಆಸ್ತಿಯ ಗುಣಮಟ್ಟ ಸುಧಾರಣೆ/ ಹೊಸ ಸೊತ್ತು/ಆಸ್ತಿ ಹೊಂದುವಿಕೆ, ಸಾಲ, ಮಾರುಕಟ್ಟೆ ಮತ್ತು ಸರಕಾರದ ಯೋಜನೆ ಮತ್ತು ಸವಲತ್ತುಗಳನ್ನು ಪಡೆಯುವಲ್ಲಿ ಸುಧಾರಣೆ ಮತ್ತು ಕೃಷಿ ಆಧಾರಿತ ಉತ್ಪಾದನಾ ವ್ಯವಸ್ಥೆಯಲ್ಲಿ ಕೌಶಲ್ಯಸುಧಾರಣೆ ಮೂಲಕ ಕೃಷಿ ಆಸ್ತಿಯಲ್ಲಿ ಅಧಿಕ ಆದಾಯ ಗಳಿಕೆ ಸಾಧ್ಯವಾಗುವಂತೆ ಪ್ರಯತ್ನಿಸುತ್ತದೆ.
ಕೃಷಿ ಜೀವನೋಪಾಯದ ಕೆಲವು ಮಧ್ಯಪ್ರವೇಶಿಕೆಗಳೆಂದರೆ-ಪರಿಸರ ಕೃಷಿ ನಿರ್ವಹಣೆ, ಸುಧಾರಿತ ಪಶುಸಂಗೋಪನಾ ನಿರ್ವಹಣೆ, ಸುಸ್ಥಿರ ಅರಣ್ಯ ಕಿರು ಉತ್ಪನ್ನ ಸಂಗ್ರಹಣೆ ಇತ್ಯಾದಿ. ಪರಿಸರ ಕೃಷಿ ನಿರ್ವಹಣೆಯಲ್ಲಿ ಹೆಚ್ಚಿನ ಗಮನ ಕೃಷಿಯಲ್ಲಿ ಉತ್ಪಾದನೆಯನ್ನು ಸ್ಥಿರಗೊಳಿಸುವುದು, ಉತ್ಪಾದನಾ ವೆಚ್ಚ ಕಡಿತದ ಮೂಲಕ ನಿವ್ವಳ ಆದಾಯದ ಏರಿಕೆಗಳಿಗೆ ಸ್ಥಳೀಯ ಪರಿಸರದ ಬಗ್ಗೆ ಗಮನಹರಿಸುವುದು ಹಾಗೂ ಸಾವಯವ ದೃಢೀಕರಣಕ್ಕೆ ಬದಲಾಗುವುದು ಸೇರಿರುತ್ತದೆ.
ಪಶುಸಂಗೋಪನೆಯಲ್ಲಿ ಸುಧಾರಿತ ಆಹಾರ ಮತ್ತು ತಳಿ ನಿರ್ವಹಣಾ ಕ್ರಮಗಳ ಮೂಲಕ ಜಾನುವಾರು ಮತ್ತು ಕುರಿ, ಮೇಕೆ, ಕೋಳಿಗಳ ಮರಣ ಮತ್ತು ಬಂಜೆತನವನ್ನು ಕಡಿಮೆ ಮಾಡುವುದು, ಮುಂಜಾಗ್ರತಾ ಆರೋಗ್ಯ ಕ್ರಮ, ಸ್ಥಳೀಯ ಪಶುವೈದ್ಯ ಕ್ರಮಗಳು, ಸುಧಾರಿತ ಕೊಟ್ಟಿಗೆಗಳು ಮತ್ತು ನಿರ್ವಹಣಾ ಕ್ರಮಗಳು ಇವೆಲ್ಲಾ ಪಶು ಸಂಗೋಪನಾ ಮಧ್ಯಪ್ರವೇಶೀಕೆಯ ಮುಖ್ಯ ಅಂಶಗಳು. ಸುಧಾರಿತ ಕಟಾವು ಕ್ರಮಗಳು, ಸುಧಾರಿತ ಬೇಸಾಯ, ಗ್ರೇಡ್ ಮಾಡುವುದು, ಅಲ್ಪಕಾಲೀನ ದಾಸ್ತಾನು, ಮೌಲ್ಯವರ್ಧನೆ, ಸಾಮೂಹಿಕ ಮಾರಾಟ, ಇವೆಲ್ಲಾ ಕಿರು ಅರಣ್ಯ ಆಧಾರಿತ ಜೀವನೋಪಾಯಗಳ ಮಧ್ಯಪ್ರವೇಶಿಕೆಗಳು. ಮೌಲ್ಯ ಸರಪಳಿ ಮಧ್ಯಪ್ರವೇಶದಲ್ಲಿ ಆಯ್ದ ಕೃಷಿ ಮತ್ತು ಕಿರು ಅರಣ್ಯ ಉತ್ಪನ್ನಗಳಲ್ಲಿ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಸುಧಾರಿತ ತಂತ್ರಜ್ಞಾನ, ಮೌಲ್ಯವರ್ಧನೆ, ಸಂಗ್ರಹ, ಉತ್ತಮ ಬೆಲೆಗಾಗಿ ಮಾರುಕಟ್ಟೆ ಸಂಪರ್ಕ ಇತ್ಯಾದಿಗಳನ್ನು ಕಲ್ಪಿಸುವುದು.
ಬಡವರು 24x7 ಸೇವೆಗಳನ್ನು ತಮ್ಮ ಮನೆ ಬಾಗಿಲಲ್ಲೇ ಪಡೆಯುವ ಸೇವಾ ವಿಸ್ತರಣಾ ವ್ಯವಸ್ಥೆಯೇ ಈ ಮಧ್ಯಪ್ರವೇಶಿಕೆಯ ಬೆನ್ನೆಲುಬು. ಇದನ್ನು ಸಮುದಾಯ ವಿಸ್ತರಣಾ ಕಾರ್ಯಕರ್ತರ ಪಡೆ/ಅಭಿವೃದ್ದಿಪಡಿಸುವ ಸೃಷ್ಟಿಸುವುದುರ ಮೂಲಕ ಮಾಡಲಾಗುತ್ತದೆ.
ಇದಲ್ಲದೇ ಸಾಮಾಜಿಕ ಬಂಡವಾಳದ ಸೃಷ್ಟಿ ಸಮಗ್ರ ತಂತ್ರೋಪಾಯವಾಗಲಿದೆ. ಇದರ ಮೂಲಕ ಗುರುತಿಸುವಿಕೆ, ಸಾಮರ್ಥ್ಯ ವೃದ್ಧಿ, ಸಮುದಾಯದ ಸಾಧಕರನ್ನು ಬಳಸಿ ಉಸ್ತುವಾರಿ ನಡೆಸುವುದು ಮುಖ್ಯವಾಗಲಿದೆ. ಪಶು ಪಾಠ ಶಾಲೆ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ವೇದಿಕೆಯ ಮುಖಾಂತರ ಎಲ್ಲಾ ವಿಸ್ತರಣಾ ಚಟುವಟಿಕೆಗಳನ್ನು ನಡೆಸಲಾಗುವುದು.ಇದರಿಂದಾಗಿ ಭಾಗವಹಿಸುವ ಸ್ವಸಹಾಯ ಗುಂಪುಗಳ ಮಹಿಳೆಯರ ಕೌಶಲ್ಯ, ಜ್ಞಾನ ಮತ್ತು ಅರಿವು ವೃದ್ಧಿಯಾಗಲಿದೆ.
ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಕೈಗೊಳ್ಳಬಹುದಾದ ಕೃಷಿ ಜೀವನೋಪಾಯ ಚಟುವಟಿಕೆಗಳು
ಅಭಿಯಾನದ ಮಾದರಿ ಕೃಷಿ ಜೀವನೋಪಾಯದ ಮಧ್ಯಪ್ರವೇಶಿಕೆಗೆ ಸಕ್ರಿಯ ಗ್ರಾಮ ಮಟ್ಟದ ಸಂಘಟನೆ ಇರಬೇಕು.ಕೆಲಸ ಮಾಡುತ್ತಿರುವ ಜೀವನೋಪಾಯ ಉಪಸಮಿತಿ, ಉತ್ಪಾದಕ ಗುಂಪುಗಳು, ಸಂಬಂಧಿತ ಜೀವನೋಪಾಯದಲ್ಲಿ ತರಬೇತಿ ಪಡೆದ ಸಮುದಾಯ ಸಂಪನ್ಮೂಲ ವ್ಯಕ್ತಿಗಳೂ ಇರಬೇಕು. ಇವುಗಳೊಂದಿಗೆ ಈ ಕೆಳಗಿನವುಗಳೂ ಇರಬೇಕು.
- ಕಿರು ಕೃಷಿ ಯಂತ್ರೋಪಕರಣ ಬಾಡಿಗೆ ಆಧಾರಿತ ಸೇವಾ ಕೇಂದ್ರ
- ರಾಸಾಯನಿಕ ರಹಿತ ನಿರ್ವಹಣೆಯ ಕೇಂದ್ರ (ಇಲ್ಲಿ ಒಳಸುರಿ ಲಭ್ಯವಿರಬೇಕು)
- ಸಾಮಾಜಿಕಬಂಡವಾಳದ ಲಭ್ಯತೆ (ಕೃಷಿ/ಪಶು/ ವನ/ಮತ್ಸ್ಯ/ ಉದ್ಯೋಗ ಸಖಿ ಇತ್ಯಾದಿ)
- ಕ್ರಿಯಾಶೀಲ ರೈತ ಪಾಠಶಾಲೆ ಅಥವಾ ಪಶು ಪಾಠಶಾಲೆ (ಎಲ್ಲಾ ಮಹಿಳಾ ರೈತರನ್ನು ಒಳಗೊಂಡ ದಾಖಲೆಗಳು ಇರಬೇಕು)
- ಅಭಿಯಾನದ ಚಟುವಟಿಕೆಗಳ ಅನುಷ್ಟಾನ ಮಧ್ಯಪ್ರವೇಶಿಕೆಗಳ ಕುರಿತಾದ ಸಾರ್ವಜನಿಕ ಮಾಹಿತಿಗಳು ಗೋಡೆ ಬರಹ ಇತ್ಯಾದಿಗಳು ಇರಬೇಕು.
- ಸ್ಥಳೀಯ/ ನಾಟಿತಳಿಗಳ ಬೀಜ ಬ್ಯಾಂಕ್
- ಪಶು ಸಂಗೋಪನೆಯಲ್ಲಿ ತರಬೇತಿ ಪಡೆದ ಪಶು ಸಖಿ ಮೂಲಕ ಪ್ರಥಮ ಚಿಕಿತ್ಸೆಯ ಲಭ್ಯತೆ
- ಪಶು ಸಂಗೋಪನಾ ಸೇವೆಗಳಾದ ಕೃತಕ ಗರ್ಭಧಾರಣೆ, ಹಿಡಮಾಡಿಸುವುದು ಮತ್ತು ಪಶು ಔಷಧಿಗಳ ಲಭ್ಯತೆ.
- ಮಾರಾಟ ಮಾಡುವ ಪ್ರಾಣಿ ಅಥವಾ ಪಕ್ಷಿಗಳ ತೂಕ ಮಾಡುವ ವ್ಯವಸ್ಥೆ
- ಪಶು ಆಹಾರದ ಉತ್ಪಾದನಾ ವ್ಯವಸ್ಥೆ
ಗ್ರಾಮ ಪಂಚಾಯತ್ ಮಟ್ಟದ ಕ್ಕೂಟವು ಈ ಕೆಳಕಂಡ ದಾಖಲೆಗಳನ್ನು ತನ್ನ ಕಛೇರಿ ಗೋಡೆಯಲ್ಲಿ ಪ್ರದರ್ಶಿಸಬೇಕು:
- ಗ್ರಾಮದ ಸಾಮಾಜಿಕ , ಜೀವನೋಪಾಯದ ನಕ್ಷೆ
- ಗ್ರಾಮದ ಜೀವನೋಪಾಯ ಮಧ್ಯಪ್ರವೇಶದ ಯೋಜನೆಗಳು
- ಮುಖ್ಯ ಸೂಚಿಗಳಲ್ಲಿ ಪ್ರಗತಿ/ ಸಾಧನೆಗಳು
- ಪಶುಗಳ ಲಸಿಕೀಕರಣ ಮತ್ತು ಜಂತುಹುಳ ನಿರ್ಮೂಲನಾ ಕ್ಯಾಲಂಡರ್
- ರೈತ ಪಾಠಶಾಲೆ ಮತ್ತು ಪಶು ಪಾಠಶಾಲೆಯ ತರಬೇತಿ ಕ್ಯಾಲೆಂಡರ್
- ಉತ್ಪಾದಕ ಸಂಘಗಳ ಹೆಸರು ಮತ್ತು ಉತ್ಪನ್ನಗಳ ವಿವರ
- ಅರಣ್ಯ ಕಿರು ಉತ್ಪನ್ನಗಳಿಗೆ ಸಾಮುದಾಯಿಕ ಸೌಕಭ್ಯ (ಒಣಗಿಸುವುದು, ದಾಸ್ತಾನು ಇತ್ಯಾದಿ)
- ಉತ್ಪಾದಕ ಸಂಘಗಳು ಭೌತಿಕ ಮತ್ತು ಆರ್ಥಿಕ ವ್ಯವಹಾರದ ದಾಖಲೆಗಳನ್ನು ಯಥಾವತ್ತುಗೊಳಿಸಿರಬೇಕು
- ತರಬೇತಿ ಪಡೆದ ಸ್ಥಳೀಯ ಗುಂಪಿನ ನಾಯಕಿ ಮತ್ತು ಕ್ರಿಯಾಶೀಲ ಸ್ಥಳೀಯ ಗುಂಪಿನ ವಿವರ ಹಾಗೂ ಸಾವಯವ ಕ್ಲಸ್ಟರುಗಳಲ್ಲಿ ಪರಸ್ಪರ ಮೌಲ್ಯಮಾಪನಾ ಗುಂಪುಗಳು
- ಸಾವಯವ ಉತ್ಪನ್ನಗಳ ಮಾರಾಟ ಕೇಂದ್ರ
ಕೌಟುಂಬಿಕ ಮಟ್ಟದಲ್ಲಿ: ಕೃಷಿ ಜೀವನೋಪಾಯ ಚಟುವಟಿಕೆಗಳು
ಕೃಷಿ ಜೀವನೋಪಾಯದ ಅಳವಡಿಸಿಕೊಳ್ಳುವ ಕುಟುಂಬವು ಕೃಷಿ ಪೌಷ್ಟಿಕ ತೋಟ ಹೊಂದಿರಬೇಕು. ಹಾಗೇ ಪರಿಸರ ಕೃಷಿ ಪದ್ಧತಿ, ಪಶು ಸಂಗೋಪನೆ, ಅರಣ್ಯ ಕಿರು ಉತ್ಪನ್ನ,ಸಾವಯವ ಕೃಷಿ, ಮೌಲ್ಯ ಸರಪಳಿ ಮಧ್ಯಪ್ರವೇಶಗಳ ಒಂದಕ್ಕಿಂತ ಹೆಚ್ಚಿನ ಚಟುವಟಿಕೆ ಹೊಂದಿರಬೇಕು. ಹಾಗೂ ಈ ಕೆಳಗಿನ ಬಹುಕ್ರಮಗಳನ್ನು ಹೊಂದಿರಬೇಕು:
- ಪ್ರತಿಯೊಬ್ಬ ಮಹಿಳಾ ರೈತರು ಕೂಡಾ ತನ್ನ ಹಿತ್ತಲಲ್ಲಿ ಸರಿಯಾದ ಯೋಜನೆಯ ಕೈತೋಟ ಮತ್ತು ಹಿತ್ತಲ ಕೋಳಿ ಸಾಕಣೆ ಹೊಂದಿರಬೇಕು. ಹೆಚ್ಚಿನ ಉತ್ಪಾದಕತೆಗೆ ಸುಧಾರಿತ ತಾಂತ್ರಿಕತೆ, ರಾಸಾಯನಿಕ ರಹಿತ ಕ್ರಮಗಳು, ವರ್ಷಪೂರ್ತಿ ಸಾವಯವ ತರಕಾರಿ ಪೂರೈಸುವಂಥಾ ಕಾಂಪೋಸ್ಟ್ ವ್ಯವಸ್ಥೆ, ಮನೆಗೆ ಬೇಕಾದ ಪೋಶಕಾಂಶ ಲಭ್ಯತೆ ಹೊಂದಿರಬೇಕು.
- ಬೀಜೋಪಚಾರ: ರಾಸಾಯನಿಕ ರಹಿತ ಬೀಜಗಳ ಆಯ್ಕೆ, ಬೀಜಾಮೃತ, ಹಸುವಿನ ಗಂಜಳ ಇತ್ಯಾದಿಗಳ ಮೂಲಕ ಬೀಜೋಪಚಾರ, ರೈಜೋಬಿಯಂ, ಟ್ರೈಕೋಡರ್ಮಾ ಸಂತುಲಿತ ಬೀಜಗಳು ಅಥವಾ ಇನ್ಯಾವುದೇ ಪಾರಂಪರಿಕ ವಿಧಾನವನ್ನು ಬೀಜ ಮೊಳಕೆಗೆ ಬಳಕೆ. ತನ್ಮೂಲಕ ಬೀಜದಿಂದ ಬರುವ ಪೀಡೆ ತಡೆ, ರೋಗ ತಡೆ ವಿಧಾನವನ್ನು ಹೊಂದಿರಬೇಕು.
- ಮಣ್ಣಿನ ಫಲವತ್ತತೆ: ಈ ಕೆಳಗಿನ ಒಂದಾದರೂ ಮಣ್ಣಿನ ಫಲವತ್ತತೆ ಸುಧಾರಿಸುವ ಕ್ರಮವನ್ನು ಹೊಂದಿರಬೇಕು. ಹಸುವಿನ ಸೆಗಣಿಯನ್ನು ಗೊಬ್ಬರವಾಗಿ ಪರಿವರ್ತಿಸುವ ಕಾಂಪೋಸ್ಟ್ (ನಡೆಪ್ ಕಾಂಪೋಸ್ಟ್ ಎರೆಹುಳ ಗೊಬ್ಬರ ಘಟಕ)/ ಹಸಿರು, ಹಸಿರೆಲೆ ಗೊಬ್ಬರ, ಅಜೋಲಾ/ ಜೀವಾಮೃತ/ ಘನ ಜೀವಾಮೃತ, ಕೆರೆ ಗೋಡು, ಬಯೋ ಗ್ಯಾಸ್ ಸ್ಲರಿ ಇತ್ಯಾದಿಗಳು.
- ರಾಸಾಯನಿಕ ರಹಿತ ಪೀಡೆ ನಿರ್ವಹಣೆ: ರಾಸಾಯನಿಕ ರಹಿತ ಕಳೆ, ಕೀಟ, ರೋಗ ನಿಯಂತ್ರಣ ಕ್ರಮಗಳ ಪೈಕಿ ಒಂದನ್ನಾದರೂ ಹೊಂದಿರಬೇಕು. ಅಗ್ನಿಯಾಸ್ತ್ರ, ನೀಮಾಸ್ತ್ರ, ಬ್ರಹ್ಮಾಸ್ತ್ರ, ಮಾಗಿ ಉಳುಮೆ, ಬೆಳೆ ಬದಲಾವಣೆ, ಕೀಟಾಕರ್ಶಕ ಬೆಲೆಗಳು, ಮುಚ್ಚಿಗೆ ಬೆಳೆ, ಹಕ್ಕಿ ಕೂರುವ ವ್ಯವಸ್ಥೆ, ಕೀಟ ತಡೆ ಅಂಟು, ಇತ್ಯಾದಿಗಳು. ಇವೆಲ್ಲದರ ಬಳಕೆ ನಿಧಾನವಾಗಿ ಸಂಪೂರ್ಣ ರಾಸಾಯನಿಕ ರಹಿತ ನಿರ್ವಹಣೆಯ ಕಡೆ ಹೊರಳಿ ಸಾವಯವ ಉತ್ಪಾದನೆಗೆ ಬದಲಾಗುತ್ತದೆ.
- ಪಶು ಸಂಗೋಪನೆಯಲ್ಲಿ ಮುನ್ನೆಚ್ಚರಿಕೆ ಆರೋಗ್ಯ ಕ್ರಮಗಳು: ಎಲ್ಲಾ ಪಶುಗಳು ಮತ್ತು ಕೋಳಿ ಇತ್ಯಾದಿಗಳಿಗೆ ನಿಯಮಿತವಾಗಿ ಹುಳ ನಿರ್ಮೂಲನಾ ಔಷಧಿ ಮತ್ತು ಲಸಿಕೀಕರಣ. ಸ್ಥಳೀಯ ಪಶು ಆರೋಗ್ಯ ವಿಧಾನಗಳು
- ಪಶುಗಳಿಗೆ ಹುಲ್ಲು ಹಿಂಡಿ ಒಳಗೊಂಡ ಪಶು ಆಹಾರ: ಪಶುಗಳಿಗೆ ತನ್ನ ಜಮೀನಿನಲ್ಲೇ ಹುಲ್ಲು ಬೆಳೆಸುವುದು, ಸ್ಥಳೀಯ ವಸ್ತುಗಳಿಂದಲೇ ಹಿಂಡಿ, ಬೂಸಾ ಗಳನ್ನು ಬಳಸಿ ಸಂತುಲಿತ ಪಶು ಆಹಾರ ತಯಾರಿಸುವುದು.
- ಪಶುಗಳಿಗೆ ಸರಿಯಾದ ಕೊಟ್ಟಿಗೆ ಮತ್ತು ಶುಚಿತ್ವ: ಎಲ್ಲಾ ಪಶು,ಪಕ್ಷಿಗಳಿಗೆ ಸರಿಯಾದ ಕೊಟ್ಟಿಗೆ ಮತ್ತು ಅಲ್ಲಿ ಶುಚಿತ್ವ ಇರಬೇಕು.
- ತಳಿ ನಿರ್ವಹಣೆ: ಜಾನುವಾರುಗಳ ಉತ್ತಮ ತಳಿ ಹೊಂದಬೇಕು.
- ಅರಣ್ಯ ಕಿರು ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಬೇಕು: ಪ್ರತ್ಯೇಕಿಸುವುದು, ಗ್ರೇಡ್ ಮಾಡುವುದು, ಒಣಗಿಸುವುದು, ಸಂಸ್ಕರಣೆ ಇತ್ಯಾದಿಗಳಲ್ಲಿ ಒಂದನ್ನಾದರೂ ಮಾಡಬೇಕು.
- ಸಾವಯವ ಕೃಷಿ: ಸಾವಯವ ಕ್ಲಸ್ಟರ್ ಗ್ರಾಮಗಳಲ್ಲಿ ಕೆಲವು ಮಹಿಳಾ ಕಿಸಾನರು ಸ್ಥಳೀಯ ಗುಂಪು/ , ನಾಯಕಿ, ಆಗಿದ್ದರೆ, ಪಿಜಿಎಸ್ ಮೂಲಕ ದೃಡೀಕರಣ ಪಡೆದು ಕೃಷಿ,ತೋಟಗಾರಿಕೆ, ಪಶು ಸಂಗೋಪನಾ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಬಹುದು.
- ಮೌಲ್ಯ ವರ್ಧನೆ:ತಮ್ಮ ಉತ್ಪನ್ನಗಳನ್ನು ಶುದ್ಧಿಕರಿಸಿ, ಗ್ರೇಡ್ ಮಾಡಿ ಕೃಷಿ ಉತ್ಪನ್ನಗಳನ್ನು ಮಾರುವ ತಮ್ಮ ತಮ್ಮ ಉತ್ಪಾದಕ ಗುಂಪುಗಳಿಗೆ ತಲುಪಿಸಬಹುದು.
ಈ ಕೆಳಕಂಡ ಹೆಜ್ಜೆ ಹೆಜ್ಜೆಯ ಕ್ರಮಗಳನ್ನು ಬಹು ಜೀವನೋಪಾಯ ಮಧ್ಯಪ್ರವೇಶಿಕೆಗಳ ಸಹಿತ ಗ್ರಾಮ ಮಟ್ಟದ ವ್ಯಾಪ್ತಿ ಸಾಂದ್ರೀಕರಣವನ್ನು ಸಾಧಿಸಬೇಕು
|
ಕೃಷಿ ಜೀವನೋಪಾಯ ಚಟುವಟಿಕೆಗಳ ಅನುಷ್ಠಾನಕ್ಕೆ ತಾಲೂಕುಗಳ ಆಯ್ಕೆ
|
↓
|
ತಾಲೂಕು ಮಟ್ಟದ ಜೀವನೋಪಾಯ ಸಿಬ್ಬಂದಿಗಳ ನಿಯೋಜನೆ
|
↓
|
ತಾಲೂಕು ಸಿಬ್ಬಂದಿಗಳಿಗೆ ತರಬೇತಿ ಮತ್ತು ಅರಿವು
|
|
ತಾಲೂಕಿನ ಸಾಂದ್ರೀಕರಣ ಯೋಜನೆಗನುಗುಣವಾಗಿ ಚಟುವಟಿಕೆಗಳ ಅನುಷ್ಟಾನಕ್ಕೆ ಗ್ರಾಮಗಳ ಆಯ್ಕೆ
|
↓
|
ಸಲಹಾ ಸೂಚಿಗಳಿಗನುಗುಣವಾಗಿ ಗ್ರಾಮ ಸಂಘಟನೆ, ಜೀವನೋಪಾಯ ಉಪಸಮಿತಿಯ ರಚನೆ, ಅನುಷ್ಠಾನ ಮತ್ತು ಉಸ್ತುವಾರಿ
|
↓
|
ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಕುರಿತಾದ ಮಾರ್ಗ ಸೂಚಿಗಳಿಗನುಗುಣವಾಗಿ ಸಿ.ಆರ್.ಪಿ.ಗಳ ಆಯ್ಕೆ ಮತ್ತು ನಿಯೋಜನೆ
|
↓
|
ಮಾರ್ಗಸೂಚಿಯಂತೆ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಮಾಸ್ಟರ್ ಸಿ.ಆರ್.ಪಿ.ಗಳ ತಂಡದ ಆಯ್ಕೆ
|
↓
|
ತರಬೇತಿ ವಿನ್ಯಾಸದಂತೆ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಮಾಸ್ಟರ್ ಸಿ.ಆರ್.ಪಿ.ಗಳ ತರಬೇತಿ
|
↓
|
ಮಾರ್ಗಸೂಚಿಯಂತೆ ಸಮಗ್ರ ಗ್ರಾಮ ಜೀವನೋಪಾಯ ವಿಶ್ಲೇಶಣೆ
|
↓
|
ಮೂರು ವರ್ಷಗಳ ಗ್ರಾಮ ಜೀವನೋಪಾಯ ಚಟುವಟಿಕೆಗಳ ಅನುಷ್ಟಾನಕ್ಕೆ ಸಮಗ್ರ ಯೋಜನೆ ತಯಾರಿಕೆ
|
↓
|
ಗ್ರಾಮ ಮಟ್ಟದ ಯೋಜನೆಯನ್ನು ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಚಟುವಟಿಕವಾರು ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕಗೊಳಿಸಿ ಸಂಬಂದಪಟ್ಟ ಸಿಬ್ಬಂದಿಗಳೊಂದಿಗೆ ಹಂಚಿಕೊಳ್ಳುವುದು
|
ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಮಾನದಂಡ ಪಾತ್ರಗಳು ಮತ್ತು ಜವಾಬ್ದಾರಿಗಳು (ಕೃಷಿ ಸಖಿ ಮತ್ತು ಪಶು ಸಖಿ)
ಡೇ-ಎನ್‌ಆರ್‌ಎಲ್.ಎಂ. ಯೋಜನೆಯ ಆಶಯದಂತೆ, ದುರ್ಬಲ ವರ್ಗದ ಜನರ ವಿವಿಧ ಹಂತದ ಸಂಸ್ಥೆಗಳನ್ನು ಸ್ಥಾಪಿಸುವುದರೊಂದಿಗೆ ಅವುಗಳ ಸುಸ್ಥಿರತೆಗಾಗಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಸೃಜಿಸಿ/ ಅಭಿವೃದ್ಧಿಪಡಿಸಿ ಅವರುಗಳ ಸಾಮಥ್ಯ ಬಲವರ್ಧನೆ ಮಾಡಬೇಕಾಗಿರುತ್ತದೆ. ಇದರಿಂದ ಸಂಸ್ಥೆಗಳ ಸುಸ್ಥಿರತೆಯನ್ನು ಕಾಪಾಡಿಕೊಂಡು ಯೋಜನೆ ಪೂರ್ಣಗೊಂಡ ನಂತರವೂ ಸಂಸ್ಥೆಗಳು ಅಸ್ತಿತ್ವದಲ್ಲಿರಬೇಕಾಗಿರುತ್ತದೆ. ಆದುದರಿಂದ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅವರ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಆಯ್ಕೆ ಮಾನದಂಡಗಳು :
- ಕನಿಷ್ಠ 2 ವರ್ಷಗಳ ಕಾಲ ಸ್ವಸಹಾಯ ಗುಂಪಿನ ಸಕ್ರೀಯ ಸದಸ್ಯರಾಗಿರಬೇಕು,
- ಕನಿಷ್ಠ 10ನೇ ತರಗತಿ ತೇರ್ಗಡೆ ಹೊಂದಿರಬೇಕು.
- ಕನಿಷ್ಠ | ಎಕರೆ ಸ್ವಂತ ಅಥವಾ ಗುತ್ತಿಗೆ ಆಧಾರದಲ್ಲಿ ಕೃಷಿ ಯೋಗ್ಯ ಜಮೀನು ಹೊಂದಿರಬೇಕು.
- ಕನಿಷ್ಠ 20 ಗುಂಟೆ ಜಮೀನಿನಲ್ಲಿ ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಿದ್ಧರಿರಬೇಕು.
- ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಸಾಕಾಣಿಕೆ, ಮೀನು ಸಾಕಾಣಿಕೆ ಹಾಗೂ ಕೃಷಿ ಸಂಬಂಧಿತ ಯಾವುದಾದರೂ ಚಟುವಟಿಕೆಗಳಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಅಳವಡಿಸಿಕೊಳ್ಳಲು ಸಿದ್ಧರಿರುವ ಆಳವಡಿಸಿಕೊಂಡು ಅನುಸರಿಸುತ್ತಿರುವ ರೈತ ಮಹಿಳೆಯಾಗಿರಬೇಕು ಅಥವಾ ಅಂತಹ ಕುಟುಂಬದ ಮಹಿಳೆ condes. (Best practitioner women farmer)
- ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಮತ್ತು ಮೀನುಗಾರಿಕೆ ಇಲಾಖೆಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಆಯೋಜಿಸಿದ್ದ ವಿವಿಧ ತರಬೇತಿಗಳಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದು,
- ಕೃಷಿ ಜೀವನೋಪಾಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ತರಬೇತಿಗಳಿಗೆ ಹಾಜರಾಗಲು ಸಿದ್ಧರಿರಬೇಕು ಮತ್ತು
- ಅನುಷ್ಠಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು. 8. ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಯಾಣ ಮಾಡಲು ಹಾಗೂ ಬೇರೆ ತಾಲ್ಲೂಕು/ಜಿಲ್ಲೆ / ರಾಜ್ಯಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲು ಸಿದ್ಧರಿರಬೇಕು,
- 15 ದಿನಗಳ ಕಾಲ ತರಬೇತಿ ಪಡೆದ ನಂತರ ಮಾಸಿಕ ರೂ.3000/- ಗಳ ಗೌರವಧನ ನೀಡಲಾಗುವುದು.
- NRLM ನ ಯಾವುದೇ ಇತರೇ ವಿಷಯಾಧಾರಿತ ವಿಭಾಗದಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿ ಆಗಿರಬಾರದು.
ಕೃಷಿ ಸಖಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳು
- ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ (GPLF) ಮಹಿಳಾ ರೈತರ ವಿವರಗಳನ್ನು ಸಂಗ್ರಹಿಸುವುದು.
- ಕೃಷಿ ಜೀವನೋಪಾಯ ಉಪಸಮಿತಿಯ ಸದಸ್ಯರಿಗೆ ತರಬೇತಿ ನೀಡುವುದು.
- ಎಲ್ಲಾ ಕೃಷಿ ಜೀವನೋಪಾಯ ಚಟುವಟಿಕೆಗಳನ್ನು ನಕ್ಷೆ ಮಾಡುವುದು.
- ರೈತರ ಕ್ಷೇತ್ರ ಪಾಠ ಶಾಲೆಯನ್ನು ಆಯೋಜಿಸುವುದು.
- ತಾಲೂಕು ಮಟ್ಟದ ಕೃಷಿ ತಾಂತ್ರಿಕ ಸಂಯೋಜಕರಿಗೆ ಅಗತ್ಯ ಸಮನ್ವಯವನ್ನು ಒದಗಿಸುವುದು.
- ಕೃಷಿ ಜೀವನೋಪಾಯ ಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ತಾಲೂಕು ಮಟ್ಟದ ಎಂಐಎಸ್ ಸಿಬ್ಬಂದಿಗೆ ನೀಡವುದು.
- ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ, ಅರಣ್ಯ ಇಲಾಖೆಗಳು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಿಂದ ಆಸ್ತಿ ರಚನೆ ಸೌಲಭ್ಯಗಳಂತಹ ಎಲ್ಲಾ ಪ್ರಯೋಜನಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು.
- ಕೃಷಿ ವಿಜ್ಞಾನ ಕೇಂದ್ರ, ನಬಾರ್ಡ್ ಮತ್ತು ಇತರ ಕೃಷಿ ಜೀವನೋಪಾಯಗಳ ಅಂಗಸಂಸ್ಥೆಗಳು ನಡೆಸುವ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳುಹಿಸುವುದು.
- ಸಾವಯವ ಗ್ರಾಮ ಕ್ಲಸ್ಟರ್ ಕಾರ್ಯಕ್ರಮ ಮತ್ತು ಸಮಗ್ರ ಕೃಷಿ ಕ್ಲಸ್ಟರ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಬ್ಲಾಕ್ ತಾಂತ್ರಿಕ ಸಂಯೋಜಕರು ಮತ್ತು ಕ್ಲಸ್ಟರ್ ತಾಂತ್ರಿಕ ಸಂಯೋಜಕರಯೊಂದಿಗೆ ಸಮನ್ವಯಗೊಳಿಸುವುದು.
- ಫಲಾನುಭವಿಗಳ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲು ಮತ್ತು ಫಲಾನುಭವಿಗಳಿಗೆ ಮಣ್ಣು ಪರೀಕ್ಷಾ ಫಲಿತಾಂಶಗಳನ್ನು ವಿತರಿಸಲು ಕೃಷಿ ಇಲಾಖೆ ಅಧಿಕಾರಿಗಳು/ಸಿಬ್ಬಂದಿಗಳೊಂದಿಗೆ ನಿಯಮಿತವಾಗಿ ಸಂಪರ್ಕ ಹೊಂದಿರಬೇಕು.
- ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಫಲಾನುಭವಿಗಳ ಕುಟುಂಬದ ಸದಸ್ಯರಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ಒದಗಿಸಬೇಕು.
- ಫಲಾನುಭವಿಗಳಿಗೆ ಬೆಳೆ ವಿಮೆಯ ಮಾಹಿತಿಯನ್ನು ಒದಗಿಸಿಸುವುದು.
- ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಯಂತ್ರೋಪಕರಣ ಕೇಂದ್ರಗಳ, ಅಧಿಕಾರಿಗಳು/ಸಿಬ್ಬಂದಿಗಳೊಂದಿಗೆ ಸಂಪರ್ಕವಿರಿಸಿ ಫಲಾನುಭವಿಗಳಿಗೆ ಈ ಕೇಂದ್ರಗಳಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸಿಸುವುದು.
- ವಿವಿಧ ಪ್ರಕಾರಗಳ ಉತ್ಪಾದಕ ಗುಂಪುಗಳನ್ನು ಸ್ಥಾಪಿಸಲು ಕೃಷಿ ಉದ್ಯೋಗ ಸವಿಗಳಿಗೆ ಸಹಾಯ ಮಾಡಬೇಕು. (ಕೃಷಿ ತೋಟಗಾರಿಕೆ, ಕುರಿ, ಮೇಕೆ, ಕೋಳಿ, ಮತ್ತು ಇತರರನ್ನು ಒಳಗೊಂಡ ಉತ್ಪಾದಕ ಗುಂಪುಗಳು).
- ಹಿತ್ತಲಿನಲ್ಲಿ ಅಥವಾ ಹೊಲಗಳಲ್ಲಿ ಆಗಿ ನ್ಯೂಟ್ರಿ ಗಾರ್ಡನ್/ಕಿಚನ್ ಗಾರ್ಡನ್‌ಗಳನ್ನು ಸ್ಥಾಪಿಸಲು ಪ್ರತಿ ಮಹಿಳಾ ರೈತರಿಗೆ ಪ್ರೋತ್ಸಾಹಿಸಿ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸುವುದು.
- ಜಿಲ್ಲಾ ಮತ್ತು ತಾಲೂಕು ಮಟ್ಟದ ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸುವುದು.
ಪಶು ಸಖಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳು
- ಪಶು ಆರೋಗ್ಯ ಶಿಬಿರಗಳನ್ನು ನಡೆಸಲು ಪಶುಪಾಲನಾ ಇಲಾಖೆ ಮತ್ತು ತಾಲೂಕು ಹೋಬಳಿ ಗ್ರಾಮ ಪಂಚಾಯತಿ ಮಟ್ಟದ ಪಶುವೈದ್ಯಕೀಯ ವೈದ್ಯರೊಂದಿಗೆ ಸಮನ್ವಯ ಸಾಧಿಸಿವುದು.
- ಸಮರ್ಥನೀಯ ಡೈರಿ ಚಟುವಟಿಕೆಗಳ ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಬಗ್ಗೆ ಫಲಾನುಭವಿಗಳಿಗೆ ಶಿಕ್ಷಣ ನೀಡುವುದು.
- ಜಾನುವಾರುಗಳ ಸಕಾಲಿಕ ಕೃತಕ ಗರ್ಭಧಾರಣೆಗಾಗಿ ವ್ಯವಸ್ಥೆಗೊಳಿಸುವುದು.
- ರೋಗಕ್ಕೆ ಸಕಾಲಿಕ ಚಿಕಿತ್ಸೆ ಮತ್ತು ಸಹಾಯವನ್ನು ಒದಗಿಸಲು ಪಶುವೈದ್ಯಕೀಯ ವೈದ್ಯರೊಂದಿಗೆ ಸಮನ್ವಯಗೊಳಿಸುವುದು.
- ಮಹಿಳಾ ರೈತರಿಗೆ ಸುಧಾರಿತ ಮೇವಿನ ಉತ್ಪಾದನೆಯ ತಾಂತ್ರಿಕ ಮಾಹಿತಿಯನ್ನು ಒದಗಿಸವುದು.
- ಮಹಿಳಾ ರೈತರಿಗೆ ಜಾನುವಾರು ವಿಮೆ ಮತ್ತು ಸತ್ತ ಪ್ರಾಣಿಗಳಿಗೆ ವಿಮೆಯ ಸಕಾಲಿಕ ಕೈಮ್‌ನಲ್ಲಿ ಅಗತ್ಯ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುವುದು.
- ಕುರಿ, ಮೇಕೆ, ಹಂದಿ, ಕೋಳಿ ಮತ್ತು ಇತರ ಸಣ್ಣ ಜಾನುವಾರು ಉತ್ಪಾದಕ ಗುಂಪುಗಳ ಉತ್ಪನ್ನಗಳ ರಚನೆ ಮತ್ತು ಮಾರುಕಟ್ಟೆಯನ್ನು ಸಂಘಟಿಸುವುದು.
- ಪಶುಸಂಗೋಪನಾ ಇಲಾಖೆಯ ಸಾಮಾನ್ಯ ಮಾಹಿತಿ ಮತ್ತು ತಾಂತ್ರಿಕ ಮಾಹಿತಿಗಾಗಿ ಪಶುಸಂಗೋಪನೆ ಸಹಾಯವಾಣಿ ಸಂಖ್ಯೆ 8277100200 ಲಭ್ಯತೆಯ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ.
- ಜಿಲ್ಲಾ ಮತ್ತು ತಾಲೂಕು ಮಟ್ಟದ ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸುವುದು.


